page

 
 
 
 
 
 
 

ಸಚ್ಛಾರಿತ್ರೈವಂತ ಮತ್ತು ಕ್ಷಾತ್ರ ತೇಜಸ್ಸಿನ ತರುಣ-ತರುಣಿಯರನ್ನು ಸಮಾಜಕ್ಕೆ ಸಮರ್ಪಿಸುವ ಮೂಲಕ, ವೈಭವಯುತ ಭಾರತವನ್ನು ಕಾಣುವುದೇ ನಮ್ಮ ಸಂಕಲ್ಪವಾಗಿದೆ

 
 

 

 

 

 

 

 

 

 

ಭಾರತವನ್ನು ಜಗಜ್ಜನನಿಯನ್ನಾಗಿಸುವ ಸಂಕಲ್ಪ ಮಾಡಿದ್ದೀವಿ. ನಿದ್ದೆಯಲ್ಲಿ, ಕನಸಿನಲ್ಲಿ ಕಣ್ಮುಚ್ಚಿ ನಾವು ಈ ನಿರ್ಣಯ ತೆಗೆದುಕೊಂಡಿದಲ್ಲ. ಇತಿಹಾಸದ ಅಧ್ಯಯನದಿಂದ ಪ್ರಾಪ್ತವಾದ ಬೆಳಕಿನಲ್ಲಿ ಅತ್ಯಂತ ನೈಸರ್ಗಿಕವಾಗಿ ಸಂಕಲ್ಪ ಮಾಡಿದ್ದೀವಿ.

 

ಇದೊಂದು ಯಜ್ಞ…. ಇದರಲ್ಲಿ ನಾವು ಭಸ್ಮ ಆಗ್ತೀವಿ….ಇದು ನಮ್ಮ ಸಂಕಲ್ಪ

 
 
ವಿದ್ಯಾರ್ಥಿ ಚಳುವಳಿಯಿಂದ....
ಗುರುಕುಲ ವಿದ್ಯಾಪೀಠ ಸ್ಥಾಪನೆಯ ತನಕ.
ಧರ್ಮದ ಸ್ಥಾಪನೆಗಾಗಿ ತಮ್ಮ ಬದುಕನ್ನು ಸಮರ್ಪಣೆ ಮಾಡುತ್ತಲೇ ಗತಿಸಿದ ಜೀವಾತ್ಮಗಳು, ಮತ್ತೊಮ್ಮೆ ಈ ಪುಣ್ಯ ಭೂಮಿಯ ಮೇಲೆ ಬಂದು ಉತ್ಕ್ರಷ್ಟವಾದ ಕಾರ್ಯದ ಅನುಷ್ಠಾನಕ್ಕಾಗಿ ನಮ್ಮ ಅರಿವಿಗೆ ಬರದಂತೆ ನಮ್ಮನ್ನು ಪ್ರೇರೇಪಿಸುತ್ತಿದೆಯೇ...? ಎಂಬುವುದರ ಸತ್ಯದ ದರ್ಶನವಿದು. ಧರ್ಮ ಸಂಸ್ಥಾಪನಾ ಪೀಠ, ಯುವ ಭಾರತ್ ಕರ್ನಾಟಕ ಎಂದಿಗೂ ಯಾವುದೇ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿಲ್ಲ. ಮುಂದೆಯೂ ಅದರ ಅವಶ್ಯಕತೆ ಬರುವುದಿಲ್ಲ. ನಮ್ಮ ಯಾವುದೇ ಕಾರ್ಯಗಳಿಗೂ ಸಾರ್ವಜನಿಕರಿಂದ ಈವರೆಗೆ ದೇಣಿಗೆ ಪಡೆದುಕೊಂಡಿಲ್ಲ. ಎರಡು ದಶಕಗಳ ಸುದೀರ್ಘವಾದ ಸಂಘಟನಾ ಬದುಕಿನ ವಾಸ್ತವ ಚಿತ್ರಣವಿದು.
 
 
 
 
 
 
ಭವಿಷ್ಯ ಭಾರತ
“ಸನಾತನ ಧರ್ಮ ರಾಜ್ಯದ ಸ್ಥಾಪನೆ ಅತೀ ಅವಶ್ಯವಾಗಿದೆ. ಸಂತರ ಮಾರ್ಗದರ್ಶನದಲ್ಲಿ ಕ್ಷಾತ್ರ ತೇಜಸ್ಸಿನ ಸಂಸ್ಕಾರವಂತ ಮತ್ತು ಸ್ವಾಭಿಮಾನಿ ತರುಣ-ತರುಣಿಯರ ತಯಾರಿಗಾಗಿ, ಗುರುಕುಲ ವಿದ್ಯಾಪೀಠ ಸ್ಥಾಪನೆಯು ಅತೀ ಅವಶ್ಯವಾಗಿದೆ” ಎನ್ನುವ ಶಬ್ದ ಶಂಖನಾದದಂತೆ ನಿದ್ದೆಯಲ್ಲಿಯೂ ನಮ್ಮನ್ನು ಎಚ್ಚರಿಸಿ-ಎಬ್ಬಿಸಿ ಹೇಳಿ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಈ ಎಲ್ಲಾ ಬೆಳೆವಣಿಗೆಗಳೇ ಮುಂದಕ್ಕೆ ಗುರುಕುಲ ವಿದ್ಯಾಪೀಠ ಸ್ಥಾಪನೆಯ ಅತ್ಯದ್ಭುತವಾದ ಸತ್-ಸಂಕಲ್ಪಕ್ಕೆ ನಾಂದಿಯಾಗುತ್ತದೆ.
ಹೆತ್ತವರ ಅಕಾಲಿಕ ಅಗಲುವಿಕೆಯಿಂದ ಭವಿಷ್ಯದ ದಾರಿ ಕಾಣದೆ ಕಂಗಾಲಾಗಿರುವ, ಸಾಧನೆ ಮತ್ತು ತ್ಯಾಗದ ಮೂಲಕ ರಾಷ್ಟ್ರ ಕಾರ್ಯಕ್ಕಾಗಿ ಸಮರ್ಪಣೆ ಆಗಬೇಕೆಂಬ ತುಡಿತವಿರುವ, ಆರ್ಥಿಕವಾಗಿ ತುಂಬಾ ಹಿಂದುಳಿದ ಸುಮಾರು 300 ಮಕ್ಕಳು ಮತ್ತು ತರುಣ-ತರುಣಿಯರ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಪಡೆಯುವುದು.
ಪ್ರತಿಭೆಗೆ ಅನುಸಾರವಾಗಿ ಶಿಕ್ಷಣದ ಜೊತೆಗೆ ಕ್ಷಾತ್ರ ತೇಜಸ್ಸನ್ನು ತುಂಬುವುದು. ಸಚ್ಚಾರಿತ್ರ್ಯ ವ್ಯಕ್ತಿತ್ವದ ಮೂಲಕ ಸಮಾಜದ ಅದ್ಭುತ ಶಕ್ತಿಯನ್ನಾಗಿ ರೂಪಿಸುವುದು. ಐ.ಎ.ಎಸ್-ಐ.ಪಿ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧಗೊಳಿಸುವುದು. ರಾಷ್ಟ್ರದ ರಕ್ಷಣೆಗಾಗಿ ಭಾರತೀಯ ಸೇನೆಗೆ ಸೇರಲು ಪ್ರೇರೇಪಿಸುವುದು. ಉತ್ತಮ ಶಿಕ್ಷಕರನ್ನಾಗಿ ರೂಪಿಸುವುದು.
ಯೋಗ-ಆಯುರ್ವೇದ-ಆಧ್ಯಾತ್ಮದ ಜ್ಞಾನವನ್ನು ತುಂಬುವುದು. ಪ್ರಾಕೃತಿಕ ಜ್ಞಾನದ ಅಧ್ಯಯನ, ಕಳರಿ ಯುದ್ಧಕಲೆಯ ತರಬೇತಿ. ಈ ಮೊದಲಾದ ವಿಚಾರಗಳಲ್ಲಿ ಪರಿಣಿತರನ್ನಾಗಿ ಸಿದ್ಧಗೊಳಿಸುವುದು.ಇಂತಹ ಅದ್ಭುತ ಜ್ಞಾನವನ್ನು ಪಡೆದ ತರುಣ-ತರುಣಿಯರಿಂದ ಭವಿಷ್ಯದಲ್ಲಿ ಸ್ಥಾಪಿಸಲ್ಪಡುವ ಗುರುಕುಲ ವಿದ್ಯಾಪೀಠದ ಸಂಕಲ್ಪವನ್ನು ಸಾಕಾರಗೊಳಿಸುವುದು.
 
 
 
 
 
 
 
 
 
 
 
 
 
 
 
 
 
ಸನಾತನ ಧರ್ಮ ರಾಜ್ಯದ
ಸ್ಥಾಪನೆಗಾಗಿ
ಗುರುಕುಲ ವಿದ್ಯಾಪೀಠ

ಭಾರತದಲ್ಲಿ ಶಿಕ್ಷಣವಿದೆ ಆದರೆ, ಶಿಕ್ಷಣದಲ್ಲಿ ಭಾರತವೇ ಇಲ್ಲ. ಪರಕೀಯರ ಶಿಕ್ಷಣದಲ್ಲಿ ಧನ ಸಂಪಾದನೆಯೇ ಮೂಲ ಗುರಿ. ಭಾರತೀಯ ಶಿಕ್ಷಣದ ಪರಮ ಉದ್ದೇಶವೇ ಆತ್ಮೋದ್ಧಾರ.

“ಸನಾತನ ಧರ್ಮ ರಾಜ್ಯದ ಸ್ಥಾಪನೆ ಅತೀ ಅವಶ್ಯವಾಗಿದೆ. ಸಂತರ ಮಾರ್ಗದರ್ಶನದಲ್ಲಿ ಕ್ಷಾತ್ರ ತೇಜಸ್ಸಿನ ಸಂಸ್ಕಾರವಂತ ಮತ್ತು ಸ್ವಾಭಿಮಾನಿ ತರುಣ-ತರುಣಿಯರ ತಯಾರಿಗಾಗಿ, ಗುರುಕುಲ ವಿದ್ಯಾಪೀಠ ಸ್ಥಾಪನೆಯು ಅತೀ ಅವಶ್ಯವಾಗಿದೆ” ಎನ್ನುವ ಶಬ್ದ ಶಂಖನಾದದಂತೆ ನಿದ್ದೆಯಲ್ಲಿಯೂ ನಮ್ಮನ್ನು ಎಚ್ಚರಿಸಿ-ಎಬ್ಬಿಸಿ ಹೇಳಿ ಹೋಗುತ್ತಿರುವಂತೆ ಭಾಸವಾಗುತ್ತಿತ್ತು. ಈ ಎಲ್ಲಾ ಬೆಳವಣಿಗೆಗಳೇ ಮುಂದಕ್ಕೆ ಗುರುಕುಲ ವಿದ್ಯಾಪೀಠ ಸ್ಥಾಪನೆಯ ಅತ್ಯದ್ಭುತವಾದ ಸತ್-ಸಂಕಲ್ಪಕ್ಕೆ ನಾಂದಿಯಾಗುತ್ತದೆ.

 
 

ಗುರುಕುಲದ ಮುಖ್ಯ ಉದ್ದೇಶಗಳು

 
 

ವಿದ್ಯಾವಂತ ಪೀಳಿಗೆ

 

ಕ್ಷಾತ್ರ ತೇಜಸ್ಸು

 

ಸಂಸ್ಕಾರ

 

ಪ್ರಕೃತಿ ಪ್ರೀತಿ

 

ಯೋಗ ಜ್ಞಾನ

 
 
 
 

ನಮ್ಮ ಚಟುವಟಿಕೆಗಳು

 
ಸ್ಥಳ: ಉಡುಪಿ. ದಿನಾಂಕ: ನವೆಂಬರ್ 15, 2019 ಪರ್ಯಾಯ ಪಲಿಮಾರು ಶ್ರೀ ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದರ ರಾಜಾಶ್ರಯದಲ್ಲಿ, ಯೋಗ ಗುರು ರಾಮ್ ದೇವ್ ಬಾಬಾ ರವರ
ಸ್ಥಳ: ಸಂಸ್ಕಾರ್ ಕಂಪ್ಯೂಟರ್ ಎಜುಕೇಶನ್ – ಉಡುಪಿ. ದಿನಾಂಕ: ಅಕ್ಟೋಬರ್ 02, 2017 ಸಮಯ: ಸಂಜೆ 04:00 ರಿಂದ 05:30 ಗಂಟೆ ಪ್ರಮುಖ ಉಪಸ್ಥಿತಿ: ಸುದೇಶ್ ರಾವ್,
ಸ್ಥಳ: ಸಂಸ್ಕಾರ್ ಫೌಂಡೇಶನ್ ಕಾರ್ಯಾಲಯ-ಉಡುಪಿ. ದಿನಾಂಕ: ಜೂನ್ 18, 2017 ಸಮಯ: ಬೆಳಿಗ್ಗೆ 11:00 ರಿಂದ 2:00 ಗಂಟೆ ಪ್ರಮುಖ ಉಪಸ್ಥಿತಿ: ರಾಜೇಂದ್ರ ಭಟ್ ಕೆ, ಮಾರ್ಗದರ್ಶಕರು,
 
 

ನಮ್ಮ ಸಂಪರ್ಕ

 
 
ವಿಳಾಸ:

 

ಯುವಭಾರತ, D.NO: 03, ಕನ್ನಿ ಮೀನುಗಾರರ ಸಂಘ,
ಪೋರ್ಟ್ ಯಾರ್ಡ್ ಮಲ್ಪೆ, ಉಡುಪಿ ಜಿಲ್ಲೆ, ಕರ್ನಾಟಕ


 ಮೊಬೈಲ್: + 91 94834 58005 / +91 98440 76580 / +91 86187 68238
ಇಮೇಲ್: yuvabharath2000@gmail.com